ಸಾಂಡ್ರಾ ಅನೆಟ್ ಬುಲಕ್ ( /ˈbʊlək/;1964 ಜುಲೈ 26 ಜನನ ) ಒಬ್ಬ ಅಮೇರಿಕನ್ ನಟಿ, ಯಶಸ್ವೀ ಚಿತ್ರಗಳಾದ ಸ್ಪೀಡ್ ಮತ್ತು ವೈಲ್ ಯು ವರ್ ಸ್ಲೀಪಿಂಗ್ ನಲ್ಲಿನ ಪಾತ್ರಗಳ ನಂತರ,1990ರ ದಶಕದಲ್ಲಿ ಹೆಸರುವಾಸಿಯಾದಳು. ವಿಮರ್ಶಕರಿಂದ ಹೊಗಳಿಕೆಯನ್ನು ಪಡೆದುಕೊಂಡ ಚಿತ್ರಗಳಾದ ಮಿಸ್ ಕಂಜೆನಿಯಾಲಿಟಿ ಮತ್ತು ಕ್ರಾಶ್ ಚಿತ್ರಗಳಿಂದ ತನ್ನ ವೃತ್ತಿ ಜೀವನವನ್ನು ಸ್ಥಾಪಿಸಿದಳು. 2007ರಲ್ಲಿ ಸುಮಾರು 85 ಮಿಲಿಯನ್ ಡಾಲರ್ ಗಳಷ್ಟು ಸಂಭಾವನೆಯನ್ನು ಪಡೆದು, ಶ್ರೀಮಂತ ಪ್ರಖ್ಯಾತ ಮಹಿಳೆಯರ ಶ್ರೇಣಿಯಲ್ಲಿ ಅವಳು 14ನೇ ಸ್ಥಾನವನ್ನು ಏರಿದಳು. 2009ರಲ್ಲಿ ಬುಲಕ್ ಅವಳ ವೃತ್ತಿಜೀವನದಲ್ಲೇ ಅತ್ಯಂತ ಹೆಚ್ಚು ಹಣಗಳಿಸಿ ನಟಿಸಿದ ಯಶಸ್ವೀ ಚಿತ್ರಗಳೆಂದರೆ ದ ಪ್ರಪೋಸಲ್ ಮತ್ತು ದ ಬ್ಲೈಂಡ್ ಸೈಡ್ . ಬುಲಕ್ ಳು ನಟಿಸಿದ ದಿ ಬ್ಲೈಂಡ್ ಸೈಡ್ ಚಿತ್ರದ ಲೀಗ್ ಆನ್ ತುಹೈ ಪಾತ್ರಕ್ಕಾಗಿ, ಅತ್ಯುತ್ತಮ ನಟಿಗಾಗಿ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಮತ್ತು ನಾಯಕತ್ವದ ಪಾತ್ರದಲ್ಲಿ, ಮಹಿಳಾ ನಟಿಯಾಗಿ ನಟಿಸಿದ ವಿಶೇಷ ಅಭಿನಯಕ್ಕಾಗಿ ಸ್ಕ್ರೀನ್ ಆಕ್ಟರ್ಸ ಗಿಲ್ಡ್ ಪ್ರಶಸ್ತಿ ಪಡೆದು ಹಾಗೂ ಅತ್ಯುತ್ತಮ ನಟಿಗಾಗಿ ಅಕಾಡೆಮಿ ಪ್ರಶಸ್ತಿಗೆ ನಾಮಾಂಕಿತಗೊಂಡಿದ್ದಾಳೆ. == ಆರಂಭಿಕ ಜೀವನ == ಸಾನ್ಡ್ರಾ ಅನೆಟ್ ಬುಲಕ್ ವರ್ಜೀನಿಯಾದ ಆರ್ಲಿಂಗ್ಟನ್ನಲ್ಲಿ ಜನಿಸಿದಳು. ಅವಳ ತಾಯಿ ಹೇಳ್ಗಾ ಡಿ. ಮೇಯರ್. ಇವಳು ಒಬ್ಬ ಜರ್ಮನ್ ಒಪೇರಾ ಗಾಯಕಿ ಮತ್ತು ಧ್ವನಿ ಶಿಕ್ಷಕಿ, ತಂದೆ ಜಾನ್ ಡಬ್ಲ್ಯೂ. ಬುಲಕ್ ಧ್ವನಿ ತರಭೇತುಗಾರನಾಗಿದ್ದು ಮತ್ತು ಅಲಬಾಮಾದ ಕಾರ್ಯನಿರ್ವಾಹಕರಾಗಿದ್ದರು. ಬುಲಕ್ ಳ ತಾಯಿಯ ತಂದೆಯು ಜರ್ಮನಿಯ ನ್ಯೂರೆಮ್ ಬರ್ಗ್ ನ ರಾಕೆಟ್ ವಿಜ್ಞಾನಿಯಾಗಿದ್ದನು. ಬುಲಕ್ ಳು ಅವಳ ಹನ್ನೆರಡನೇ ವಯಸ್ಸಿನವರೆಗೂ ನ್ಯೂರೆಮ್ ಬರ್ಗ್ ನಲ್ಲಿ ವಾಸಿಸುತ್ತಿದ್ದು, ಸ್ಟಾಟ್ಸ್-ಥಿಯೇಟರ್ ನರ್ನ್ಬರ್ಗ್ ನಲ್ಲಿ ಒಪೇರಾದ ಮಕ್ಕಳ ಗಾಯನ ವೃಂದದಲ್ಲಿ ಹಾಡುತ್ತಿದ್ದಳು. ಅವಳು ಅವಳ ತಾಯಿಯ ಜೊತೆ ಅಗ್ಗಾಗ್ಗೆ ಒಪೇರಾ ಪ್ರವಾಸದಲ್ಲಿ ಪ್ರಯಾಣ ಮಾಡುತ್ತಿದ್ದಳು, ಮತ್ತು ಅವಳ ಬಾಲ್ಯದ ಹೆಚ್ಚು ದಿನಗಳನ್ನು ಜರ್ಮನಿ ಮತ್ತು ಯೂರೋಪಿನ ಇತರ ಭಾಗಗಳಲ್ಲಿ ವಾಸಿಸುತ್ತಿದ್ದಳು. ಅವಳು ಜರ್ಮನ್ ಭಾಷೆಯಲ್ಲಿ ನಿರರ್ಗಳವಾಗಿ ಮಾತನಾಡಬಲ್ಲಳು. ಬುಲಕ್ ಳು ಚಿಕ್ಕಂದಿನಲ್ಲೇ ಬಾಲೆಟ್ ಮತ್ತು ಧ್ವನಿ ಕಲೆಯನ್ನು ಓದಿದ್ದು, ಅವಳ ತಾಯಿಯ ಒಪೆರಾ ತಯಾರಿಕೆಗಳಲ್ಲಿ ಸಣ್ಣ ಪಾತ್ರಗಳನ್ನೂ ಮಾಡುತ್ತಿದ್ದಳು. ಬುಲಕ್ ವಾಷಿಂಗ್ಟನ್-ಲೀ ಪ್ರೌಢ ಶಾಲೆಗೆ ಸೇರಿ ಚೀರ್ ಲೀಡರ್ ಆಗಿದ್ದು, ಪ್ರೌಢ ಶಾಲೆಯ ನಾಟಕ ತಯಾರಿಕೆಗಳಲ್ಲಿ ಪಾಲ್ಗೊಂಡಿದ್ದು ಮತ್ತು ಫುಟ್ಬಾಲ್ ಆಟಗಾರನ ಜೊತೆ ಪರಿಚಯ ಮಾಡಿಕೊಂಡು ಸುತ್ತಾಡುತ್ತಿದ್ದಳು. 1982ರಲ್ಲಿ ಅವಳು ಪದವೀಧರೆಯಾಗಿ, ನಾರ್ತ್ ಕರೋಲಿನದ ಗ್ರೀನ್-ವಿಲ್ನ ಈಸ್ಟ್ ಕರೊಲಿನ ವಿಶ್ವವಿದ್ಯಾನಿಲಯದಲ್ಲಿ ದಾಖಲಾದಳು. ಅಭಿನಯವನ್ನೇ ವೃತ್ತಿಯನ್ನಾಗಿ ಮುಂದುವರಿಸಲು, 1986ರ ವಸಂತ ಋತುವಿನ ತನ್ನ ಕೊನೆಯ ವರ್ಷದಲ್ಲಿ ಪದವೀಧರೆಯಾಗಲು ಮೂರೇ ಮೂರು ಕ್ರೆಡಿಟ್-ಗಳು ಕಡಿಮೆ ಇರುವಾಗಲೇ ಈಸ್ಟ್ ಕರೊಲಿನ ಕಾಲೇಜನ್ನು ಬಿಟ್ಟಳು. ಅವಳು ಮನ್ಹಾಟ್ಟನ್ ಗೆ ಸ್ಥಳಾಂತರಗೊಂಡು ಆಯ್ಕೆಯನ್ನು ಬೆನ್ನಟ್ಟಿ ಮುಂದೆ ಹೋಗುವುದಕ್ಕಾಗಿ, ವಿವಿಧ ಚಿಲ್ಲರೆ ಕೆಲಸಗಳನ್ನು ಮಾಡಿ ತನ್ನ ಜೀವನಕ್ಕೆ ತಾನೇ ಆಧಾರಸ್ಥಂಭವಾದಳು(ಬಾರ್ಟೆಂಡರ್, ಕಾಕ್ಟೈಲ್ ವೈಟ್ರೆಸ್ಸ್, ಕೊಟ್ ಚೆಕ್ಕೆರ್ ಮುಂತಾದವುಗಳು) ಅನಂತರ ಬುಲಕ್ ಈಸ್ಟ್ ಕರೊಲಿನ ವಿಶ್ವವಿದ್ಯಾನಿಲಯ ದಲ್ಲಿ ತನ್ನ ವಿದ್ಯಾಭ್ಯಾಸದ (ಕೋರ್ಸ್ ವರ್ಕ್) ಉಳಿದ ಭಾಗವನ್ನು ಮುಗಿಸಿದಳು. == ವೃತ್ತಿ ಜೀವನ == ನ್ಯೂಯಾರ್ಕಿನಲ್ಲಿದ್ದಾಗ, ಬುಲಕ್ ಳು ನೈಬರ್ ಹುಡ್ ಪ್ಲೇಹೌಸ್ನಲ್ಲಿ ಅಭಿನಯ ತರಭೇತಿ ಯನ್ನು ಪಡೆಯುತ್ತಿದ್ದಳು. ಅವಳು ಹಲವಾರು ವಿದ್ಯಾರ್ಥಿ ಚಲನಚಿತ್ರಗಳಲ್ಲಿ ನಟಿಸಿದ್ದು, ನಂತರ ಹೆಚ್ಚು ಹೆಸರುವಾಸಿಯಲ್ಲದ ಬ್ರಾಡ್ವೆ ನಾಟಕದ ನೋ ಟೈಮ್ ಫ್ಲಾಟ್ ನಲ್ಲಿ ಪಾತ್ರವೊಂದನ್ನು ಗಿಟ್ಟಿಸಿಕೊಂಡಳು. ನಿರ್ದೇಶಕ ಅಲನ್ ಜೆ. ಲೆವಿ ಬುಲಕ್ ಳ ಅಭಿನಯದಿಂದ ಪ್ರಭಾವಿತರಾಗಿ ಮತ್ತು ದೂರದರ್ಶನಕ್ಕೆ ಮಾಡಿಸಲ್ಪಟ್ಟ ಚಲನಚಿತ್ರವಾದ ಬಯೊನಿಕ್ ಶೋಡೌನ್: ದಿ ಸಿಕ್ಸ್ ಮಿಲಿಯನ್ ಡಾಲರ್ ಮ್ಯಾನ್ ಅಂಡ್ ದಿ ಬಯೊನಿಕ್ ವುಮನ್ ನಲ್ಲಿ (1989) ಅವಳಿಗೊಂದು ಪಾತ್ರವನ್ನು ಕೊಟ್ಟನು. ಈ ಚಲನಚಿತ್ರದ ಚಿತ್ರೀಕರಣದ ನಂತರ, ಬುಲಕ್ ಳು ಲಾಸ್ ಎಂಜಲೀಸ್ ನಲ್ಲೇ ಉಳಿದುಕೊಂಡಿದ್ದು, ಮತ್ತು ಹಲವಾರು ಸ್ವತಂತ್ರ ಚಲನಚಿತ್ರಗಳಲ್ಲಿ ಸಣ್ಣ ಪಾತ್ರಗಳನ್ನೂ ಮಾಡಿದಳು. ಇದಲ್ಲದೆ ಅಲ್ಪಾವಧಿಗೆ ನಡೆದ ಎನ್ ಬಿ ಸಿನ ದೂರದರ್ಶನಕ್ಕಾಗಿ ಮಾಡಿಸಿರುವ ವರ್ಕಿಂಗ್ ಗರ್ಲ್ (1990) ಚಲನಚಿತ್ರದಲ್ಲಿ, ಮುಖ್ಯ ನಟಿಯ ಪಾತ್ರವನ್ನು ಮಾಡಿದಳು. ನಂತರ ಅವಳು, ಲವ್ ಪೋಶನ್ ನಂಬರ್.9 (1992), ದಿ ಥಿಂಗ್ ಕಾಲ್ಡ್ ಲವ್ (1993) ಮತ್ತು ಫಾಯರ್ ಆನ್ ದಿ ಅಮೇಜಾನ್ (ಈ ಚಿತ್ರದಲ್ಲಿ ಕ್ಯಾಮರಾ ಹೆಚ್ಚಾಗಿ ಬಹಿರಂಗ ಮಾಡದಿದ್ದಲ್ಲಿ ದೇಹದ ಮೇಲ್ಭಾಗವನ್ನು ಮಾತ್ರ ಬಯಲು ಮಾಡುವುದಾಗಿ ಒಪ್ಪಿದ್ದಳು; ಅವಳು ತನ್ನನು ತಾನೇ ಡಕ್ಟ್ ಟೇಪ್ ನಿಂದ ಮುಚ್ಚಿಕೊಂಡಿದ್ದು, ಅದನ್ನು ತೆಗೆಯುವುದು ಏನೋ ಒಂದು ರೀತಿಯ ವೇದನೆಯ ಅನುಭವವಾಗಿತ್ತು) ಚಿತ್ರಗಳಲ್ಲಿ ಕಾಣಿಸಿಕೊಂಡಳು. ಸೈನ್ಸ್-ಫಿಕ್ಷನ್/ಆಕ್ಷನ್ ಚಿತ್ರವಾದ ಡೆಮೊಲಿಷನ್ ಮ್ಯಾನ್ ನಲ್ಲಿ (1993) ಬುಲಕ್ ಳ ಪಾತ್ರ ಮೊದಲನೆಯದಾಗಿ ಪ್ರಖ್ಯಾತಿ ಪಡೆಯಿತು. ಈ ಚಿತ್ರದಲ್ಲಿ ಸಿಲ್ವೆಸ್ಟರ್ ಸ್ಟಾಲೋನ್ ಮತ್ತು ವೆಸ್ಲಿ ಸ್ನೈಪ್ಸ್ ನಟಿಸಿದ್ದರು. ಈ ಪಾತ್ರದಿಂದಾಗಿ, ಮುಂದಿನ ವರ್ಷ ಸ್ಪೀಡ್ ಚಿತ್ರದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಲು ಸಾಧ್ಯವಾಯಿತು. 1990ರ ದಶಕದಲ್ಲಿ ಅವಳು ಒಬ್ಬ ಉತ್ತಮ ದರ್ಜೆಯ ಚಿತ್ರ ತಾರೆಯಾಗಿದ್ದಳು. ಒಂದರ ಹಿಂದೊಂದು ಯಶಸ್ವಿಯಾದ ಚಿತ್ರಗಳ ಸರಣಿಯಲ್ಲಿ ನಟಿಸಿ, ಮೂಲತಃ ಡೆಮಿ ಮೂರ್ ನಟಿಸಬೇಕಾಗಿದ್ದ ವೈಲ್ ಯು ವೇರ್ ಸ್ಲೀಪಿಂಗ್ ಚಿತ್ರದಲ್ಲಿ ಹಾಗು ಮಿಸ್ ಕಾನ್ಜೆನಿಯಾಲಿಟಿ ಚಿತ್ರದಲ್ಲೂ ನಟಿಸಿದಳು. ಬುಲಕ್ ಳು 2: ಗಾಗಿ 11 ಮಿಲಿಯನ್ ಡಾಲರ್ ಗಳು ಮತ್ತು 2: & ಗಾಗಿ 17.5 ಮಿಲಿಯನ್ ಡಾಲರ್ ಗಳನ್ನು ಪಡೆದಳು. 1996 ಮತ್ತು 1999ರಲ್ಲಿ ಬುಲಕ್ ಳನ್ನು ಪೀಪಲ್ ನಿಯತಕಾಲಿಕದಲ್ಲಿ, ವಿಶ್ವದ 50 ಅತಿ ಸುಂದರವಾದ ಜನರಲ್ಲಿ ಒಬ್ಬಳು ಎಂದು ಆಯ್ಕೆ ಮಾಡಲಾಗಿತ್ತು, ಮತ್ತು ಎಂಪೈರ್ ನಿಯತಕಾಲಿಕದಲ್ಲಿನ ಎಲ್ಲಾ ಕಾಲದ ನೂರು ಅತ್ಯುತ್ತಮ ಚಿತ್ರ ತಾರೆಯರ ಪಟ್ಟಿಯಲ್ಲಿ ಅವಳು 58ನೇ ಸ್ಥಾನವನ್ನು ಗಳಿಸಿದಳು. ಬುಲಕ್ ಳು ದಿ ಜಾರ್ಜ್ ಲೋಪೆಜ್ ಷೋ ಎಂಬ ಸಿಟ್ಕಾಮ್ ನ ಕಾರ್ಯನಿರ್ವಾಹಕ ನಿರ್ಮಾಪಕಳಾಗಿದ್ದು, ಮಾಧ್ಯಮ ಮತ್ತು ಮನರಂಜನಾ ಉದ್ಯಮಗಳಲ್ಲಿ ಹಿಸ್ಪಾನಿಕ್ ಪ್ರತಿಭೆಗಳ ವೃತ್ತಿ ಜೀವನದ ವಿಸ್ತರಣೆಗೆ ಸಹಾಯ ಮಾಡುವುದರಲ್ಲಿನ ಅವಳ ಶ್ರಮಕ್ಕೆ 2002ರಲ್ಲಿ ಶ್ರೇಷ್ಟತೆಗಾಗಿ ರೌಲ್ ಜುಲಿಯ ಪ್ರಶಸ್ತಿ ಯನ್ನು ಅವಳಿಗೆ ನೀಡಲಾಯಿತು. ಅವಳು ಅನೇಕ ಭಾರಿ ಈ ಪ್ರದರ್ಶನದಲ್ಲಿ ಆಕ್ಸಿಡೆಂಟ್ ಏಮಿ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಲೋಪೆಜ್ ಪಾತ್ರವು ಕಾರ್ಖಾನೆಯನ್ನು ನಿಭಾಯಿಸುತ್ತಿದ್ದು, ಬುಲಕ್ ಳದು ಕಾರ್ಖಾನೆಯಲ್ಲಿ ಆಗಾಗ ಅಪಾಘಾತಕ್ಕೊಳಗಾಗುವ ಕಾರ್ಮಿಕಳ ಪಾತ್ರವಾಗಿದೆ. 2002ರಲ್ಲಿ ಅವಳು ಹ್ಯೂಗ್ ಗ್ರಾಂಟ್ನೊಂದಿಗೆ ಟೂ ವೀಕ್ಸ್ ನೋಟೀಸ್ ಎಂಬ ವಿಶ್ವ ವಿಖ್ಯಾತ ಯಶಸ್ವೀ ಚಲನಚಿತ್ರದಲ್ಲಿ ನಟಿಸಿದಳು. 2004ರಲ್ಲಿ, ಬುಲಕ್ ಳು ಕ್ರಾಶ್ ಚಿತ್ರದಲ್ಲಿ ಒಬ್ಬ ಸಹಾಯಕ ನಟಿಯ ಪಾತ್ರವನ್ನು ಮಾಡಿದಳು. ಈ ಪಾತ್ರದ ಅಭಿನಯಕ್ಕಾಗಿ ಅವಳು ಧನಾತ್ಮಕ ವಿಮರ್ಶೆಯನ್ನು ಪಡೆದಿದ್ದು, ಮತ್ತೆ ಕೆಲವು ವಿಮರ್ಶಕರು,ಈ ಅಭಿನಯವು ಅವಳ ವೃತ್ತಿ ಜೀವನದಲ್ಲೇ ಅತ್ಯುತ್ತಮವಾದ ಅಭಿನಯ ಎಂದು ಸೂಚಿಸಿದರು. ನಂತರ ಬುಲಕ್ ಳು, ಅವಳ ಸ್ಪೀಡ್ ಚಿತ್ರದ ಸಹ ನಟ ಕಿಯನು ರೀವ್ಸ್ನೊಂದಿಗೆ ದಿ ಲೇಕ್ ಹೌಸ್ ಎಂಬ ಒಂದು ಪ್ರೀತಿ-ಭಾವನಾತ್ಮಕ ಚಲನಚಿತ್ರದಲ್ಲಿ, ಅಭಿನಯಿಸಿದಳು; ಈ ಚಿತ್ರವು ಜೂನ್ 16, 2006ರಲ್ಲಿ ಬಿಡುಗಡೆಯಾಯಿತು. ಅವರ ಪಾತ್ರಗಳು ಚಿತ್ರವಿಡೀ ಬೇರ್ಪಡೆಯಾಗಿರುವುದರಿಂದ (ಚಿತ್ರದ ಕಥಾವಸ್ತುವು ಟೈಮ್ ಟ್ರಾವೆಲ್ ಮೇಲೆ ಅವಲಂಬಿತವಾಗಿರುವುದರಿಂದ), ಬುಲಕ್ ಮತ್ತು ರೀವ್ಸ್ ಚಿತ್ರೀಕರಣದ ಸಮಯದಲ್ಲಿ ಕೇವಲ ಎರಡು ವಾರಗಳು ಮಾತ್ರ ಜೊತೆಗಿದ್ದರು. ಅದೇ ವರ್ಷದಲ್ಲಿ ಬುಲಕ್ ಳು ಇನ್-ಫೇಮಸ್ ಚಿತ್ರದಲ್ಲಿ, ಹಾರ್ಪರ್ ಲೀ ಎಂಬ ಲೇಖಕಿಯ ಪಾತ್ರವನ್ನು ಮಾಡಿದಳು. ಮಾರ್ಚ್ 2007ರಲ್ಲಿ ಬಿಡುಗಡೆಯಾದ ಪ್ರೆಮೊನಿಶನ್ ಚಿತ್ರದಲ್ಲೂ ಜ್ಯೂಲಿಯನ್ ಮಕ್ಮಹೊನ್ ಜೊತೆಯಲ್ಲಿ ಬುಲಕ್ ನಟಿಸಿದಳು. 2009ರ ವರ್ಷವು ಬುಲಕ್ ಳಿಗೆ ವಿಶೇಷವಾಗಿ ಅತ್ಯುತ್ತಮವಾಗಿತ್ತು, ಅವಳ ವೃತ್ತಿ ಜೀವನದಲ್ಲೇ ಎರಡು ಅತ್ಯುತ್ತಮ ತುಟ್ಟ-ತುದಿಯನ್ನು ಮುಟ್ಟಿತು. ಈ ವರ್ಷದ ಪ್ರಾರಂಭದಲ್ಲಿ ದಿ ಪ್ರೊಪೋಸಲ್ ಚಿತ್ರ ಬಿಡುಗಡೆಯಾಗಿದ್ದು, ಭಾರಿ ಯಶಸ್ಸು ಗಳಿಸಿ ವಿಶ್ವದಾದ್ಯಂತ ಗಲ್ಲಾ ಪೆಟ್ಟಿಗೆಯಲ್ಲಿ 314 ಮಿಲಿಯನ್ ಡಾಲರ್ ಗಳಿಗಿಂತ ಹೆಚ್ಚು ಹಣ ಗಳಿಸಿ, ಇಲ್ಲಿಯವರೆಗೆ ಅವಳ ವೃತ್ತಿ ಜೀವನದ ಅತ್ಯಂತ ಯಶಸ್ವೀ ಚಿತ್ರವಾಗಿದೆ. 2009ರ ನವಂಬರ್ ನಲ್ಲಿ ಬುಲಕ್ ಳು ದಿ ಬ್ಲೈಂಡ್ ಸೈಡ್ ಚಿತ್ರದಲ್ಲಿ ನಟಿಸಿದಳು, ಈ ಚಿತ್ರವು ನ್ಯೂ ಮೂನ್ ಚಿತ್ರದ ನಂತರ ಎರಡನೆಯ ಚಿತ್ರವಾಗಿ ತೆರೆಕಂಡು 34.2 ಮಿಲಿಯನ್ ಡಾಲರ್ ಗಳಷ್ಟು ಹಣ ಮಾಡಿ, ಅವಳಿಗೆ ಅತ್ಯುನ್ನತ ಸ್ಥಿತಿಯನ್ನು ತಂದುಕೊಟ್ಟ ತೆರೆಕಂಡ ಚಿತ್ರ ವಾರಾಂತ್ಯದ್ದಾಗಿತ್ತು. ಈ ದಿಸೆಯಲ್ಲಿ ದಿ ಬ್ಲೈಂಡ್ ಸೈಡ್ ಅಪೂರ್ವವಾಗಿದ್ದು, ಎರಡನೆಯ ವಾರಾಂತ್ಯಕ್ಕೆ ಗಲ್ಲಾ ಪೆಟ್ಟಿಗೆಯಲ್ಲಿ ಶೇಕಡಾ 17.6ರಷ್ಟು ಏರಿಕೆಯನ್ನು ಕಂಡಿದ್ದು, ಮತ್ತು ಮೂರನೆಯ ವಾರಾಂತ್ಯದ ವೇಳೆಗೆ ಗಲ್ಲಾ ಪೆಟ್ಟಿಗೆಯಲ್ಲಿ ಇದು ಅತ್ಯಂತ ಪ್ರಮುಖ ಸ್ಥಾನವನ್ನು ಆಕ್ರಮಿಸಿತು. ಈ ಚಿತ್ರದ ತಯಾರಿಕೆಗೆ 29 ಮಿಲಿಯನ್ ಡಾಲರ್ ವೆಚ್ಚವಾಗಿದ್ದು, ಈ ದಿನದವರೆಗೆ ಇದು 200 ಮಿಲಿಯನ್ ಡಾಲರ್ ಗೂ ಹೆಚ್ಚು ಹಣವನ್ನು ಗಳಿಸಿದೆ. ಇದು ಅವಳ ಅತ್ಯಂತ ಹೆಚ್ಚು ಗಳಿಕೆಯ ಚಿತ್ರ ಮತ್ತು ಚಿತ್ರರಂಗದ ಇತಿಹಾಸದಲ್ಲೇ ಮೊದಲ ಭಾರಿಗೆ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ನಟಿಯೊಬ್ಬಳನ್ನೇ ಇಟ್ಟುಕೊಂಡು 200 ಮಿಲಿಯನ್ ಡಾಲರ್ ಗಳಿಗಿಂತ ಹೆಚ್ಚು ಹಣ ಗಳಿಸಿರುವ ಮೊಟ್ಟ ಮೊದಲ ಚಿತ್ರವಾಗಿದೆ. ಅವಳ "ದಿ ಬ್ಲೈಂಡ್ ಸೈಡ್" ಚಿತ್ರದಲ್ಲಿನ ಅಭಿನಯಕ್ಕಾಗಿ, ಅವಳು ಗೋಲ್ಡನ್ ಗ್ಲೋಬ್ಸ್ನಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿ ಮತ್ತು ಸ್ಕ್ರೀನ್ ಅಕ್ಟರ್ಸ್ ಗಿಲ್ಡ್ ಪ್ರಶಸ್ತಿ ಗಳಿಸಿದ್ದಾಳೆ. == ಆನ್ಟರ್-ಪ್ರಿನರ್ಶಿಪ್ == ಬುಲಕ್ ಳು ತನ್ನದೇ ಆದ ನಿರ್ಮಾಣ ಸಂಸ್ಥೆ ಫೋರ್ಟಿಸ್ ಫಿಲಂಸ್ ಅನ್ನು ನಡೆಸುತ್ತಿದ್ದಾಳೆ. ಅವಳ ತಂಗಿ, ಜೆಸೀನ್ ಬುಲಕ್-ಪ್ರಾಡೋ ಆ ಸಂಸ್ಥೆಯ ಅದ್ಯಕ್ಷಿಣಿಯಾಗಿದ್ದಳು, ಆದರೆ ಈಗ ಅಲ್ಲಿ ಕೆಲಸ ಬಿಟ್ಟು ಮತ್ತು ಮೊಂಟ್ಪೆಲಿಯರ್, ವೆರ್ಮಾಂಟ್ಗೆ ಸ್ಥಳಾಂತರಗೊಂಡು, ತನ್ನದೇ ಹಿಟ್ಟಿನಿಂದ ತಯಾರಿಸುವ ಭಕ್ಷ್ಯ ಅಂಗಡಿಯನ್ನು (ಪೇಸ್ಟ್ರಿ ಅಂಗಡಿ) ತರೆದು ಮತ್ತು ಒಂದು ಪುಸ್ತಕವನ್ನು ಪ್ರಕಟಿಸಿದಳು. ಅವಳ ತಂದೆ, ಜಾನ್ ಬುಲಕ್, ಸಂಸ್ಥೆಯ ಸಿಇಒ. ಬುಲಕ್ ದಿ ಜೋರ್ಜ್ ಲೋಪೆಜ್ ಷೋ ವಿನ ಕಾರ್ಯನಿರ್ವಾಹಕ ನಿರ್ಮಾಪಕಿಯಾಗಿದ್ದಳು. ಈ ಕಾರ್ಯಕ್ರಮವು, ಒಂದು ಉತ್ತಮ ಲಾಭದಾಯಕ ಮಾರಾಟದ ವ್ಯವಹಾರದಿಂದ ಅವಳಿಗೆ ಸುಮಾರು 10 ಮಿಲಿಯನ್ ಡಾಲರ್ ಗಳಷ್ಟು ಹಣ ಮಾಡಿಕೊಟ್ಟಿತು(ರಾಬರ್ಟ್ ಬೋರ್ಡೆನ್ ಜೊತೆ ಸಹ-ನಿರ್ಮಾಣ). ಬುಲಕ್ ಎಫ್.ಎಕ್ಸ್. ಟೂಲ್ನ ಮಿಲಿಯನ್ ಡಾಲರ್ ಬೇಬಿ ಎಂಬ ಸಣ್ಣ ಕಥೆಯನ್ನು ಆಧರಿಸಿ ಚಿತ್ರವನ್ನು ನಿರ್ಮಾಣ ಮಾಡಲು ಪ್ರಯತ್ನಿಸಿದಳು, ಆದರೆ ಮಹಿಳೆಯೊಬ್ಬಳು ಬಾಕ್ಸಿಂಗ್ ಮಾಡುವುದರ ಕಥಾವಸ್ತುವನ್ನು ಚಿತ್ರಿಸುವುದು ಚಿತ್ರೀಕರಣ ಕಾರ್ಯಾಲಯಗಳಿಗೆ (ಸ್ಟುಡಿಯೋಸ್) ಇಷ್ಟವಿರಲಿಲ್ಲ. ಕೊನೆಗೆ ಈ ಕಥೆಯನ್ನು, ಕ್ಲಿಂಟ್ ಈಸ್ಟ್-ವುಡ್ನು ಸರಿಹೊಂದಿಸಿಕೊಂಡು ನಿರ್ದೇಶಿಸಿದ ಮಿಲಿಯನ್ ಡಾಲರ್ ಬೇಬಿ (2004) ಚಿತ್ರಕ್ಕೆ ಆಸ್ಕರ್ ಪ್ರಶಸ್ತಿ ದೊರೆಯಿತು. ಬುಲಕ್ ಳ ನಿರ್ಮಾಣ ಸಂಸ್ಥೆ, ಫೋರ್ಟಿಸ್ ಫಿಲಂಸ್, ಆಲ್ ಎಬೌಟ್ ಸ್ಟೀವ್ ಚಿತ್ರವನ್ನೂ ಸಹ ನಿರ್ಮಾಣ ಮಾಡಿದೆ. ಈ ಚಿತ್ರವು ಸೆಪ್ಟೆಂಬರ್ 2009ರಂದು ಬಿಡುಗಡೆಯಾಯಿತು. ನವೆಂಬರ್ 2006ರಿಂದ, ಬುಲಕ್ ಳು ಆಸ್ಟಿನ್, ಟೆಕ್ಸಾಸ್ನ ಬೆಸ್ಸ್ ಬಿಸ್ಟ್ರೋ ಎಂಬ ಹೆಸರಿನ ಭೋಜನಾ ಗೃಹದ ಮಾಲೀಕಳಾಗಿದ್ದಾಳೆ. ನಂತರ ಅವಳು ಇನ್ನೊಂದು ವಾಲ್ಟನ್ಸ್ ಫ್ಯಾನ್ಸಿ ಅಂಡ್ ಸ್ಟೇಪಲ್ ವ್ಯಾಪಾರವನ್ನು ಡೌನ್-ಟೌನ್ ಆಸ್ಟಿನ್ ನಲ್ಲಿ ಪ್ರಾರಂಭಿಸಿದಳು. ಇದು ಒಂದು ರೊಟ್ಟಿ ಅಂಗಡಿ (ಬೇಕರಿ) ಮತ್ತು ಹೂವಿನ ಅಂಗಡಿ ಆಗಿದ್ದು, ಅಲ್ಲಿ ಇವೆಂಟ್ ಮ್ಯಾನೇಜ್ಮೆಂಟ್ ನ ಸೇವೆಗಳನ್ನೂ ಮಾಡಲಾಗುತ್ತದೆ. == ವೈಯಕ್ತಿಕ ಜೀವನ == ಬುಲಕ್ ಳು ಲವ್ ಪೋಶನ್ ನಂ.9 ಚಿತ್ರೀಕರಣದ ವೇಳೆ ಟೇಟ್ ಡೋನೋವನ್ನ ಭೇಟಿಯಾಗುತಿದ್ದು, ಅವನ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಳು, ಅವರ ಸಂಬಂಧವು ನಾಲ್ಕು ವರ್ಷಗಳವರೆಗೆ ಇತ್ತು. ಅವಳು ಈ ಹಿಂದೆ ಫುಟ್ಬಾಲ್ ಆಟಗಾರ ಟ್ರಾಯ್ ಐಕ್ಮನ್, ಆಸ್ಟಿನ್ ಸಂಗೀತಗಾರ ಬಾಬ್ ಸ್ನೈಡರ್ (ಎರಡು ವರ್ಷಗಳ ಕಾಲ), ಮತ್ತು ನಟರು ಮ್ಯಾಥ್ಯೂ ಮಕ್-ಕೊನಾಘೆ ಮತ್ತು ರಯಾನ್ ಗೋಸ್ಲಿಂಗ್ ಜೊತೆ ಸಂಭಂಧವಿತ್ತು. ಜುಲೈ 16, 2005ರಂದು ಬುಲಕ್ ಳು ಮೋಟರ್-ಸೈಕಲ್ ತಯಾರಿಸುವವನು ಮತ್ತು ಮಾಂಸ್ಟರ್ ಗ್ಯಾರೇಜ್ ನ ಆತಿಥೇಯನಾದ ಜೆಸ್ಸಿ ಜೇಮ್ಸ್ನ ಮದುವೆಯಾದಳು. ಬುಲಕ್ ಳು ಕ್ರಿಸ್ಟ್ಮಸ್ ಕೊಡುಗೆಯಾಗಿ ತನ್ನ 10 ವರ್ಷದ ಗಾಡ್-ಸನ್ನನ್ನು ಜೇಮ್ಸ್ ನ ಭೇಟಿ ಮಾಡಲು ಏರ್ಪಡಿಸುವಾಗ, ಜೇಮ್ಸ್ ನನ್ನು ಭೇಟಿಯಾದಳು. ಡಿಸೆಂಬರ್ 20, 2000ದಂದು ಬುಲಕ್ ಳು ಜಾಕ್ಸನ್ ಹೋಲ್ ಏರ್ಪೋರ್ಟ್ನಲ್ಲಿ ಬಾಡಿಗೆಗೆ ತೆಗೆದುಕೊಂಡ ಬಿಸ್ನೆಸ್ ಜೆಟ್ ನ ಅವಘಡದಿಂದ ಬದುಕಿದಳು. ವಿಮಾನವು ರನ್ವೇ ಮೇಲೆ ಹೋಗುವ ಬದಲು ಹಿಮದಂಡೆಯನ್ನು ಬಡಿದು, ವಿಮಾನದ ನೋಸ್ ಗೇರ್ ಮತ್ತು ನೋಸ್ ಕೋನ್ ಗಳೆರಡೂ ಬಿದ್ದು ಹೋದವು, ವಿಮಾನದಿಂದ ವಿಮಾನದ ಬಲ ರೆಕ್ಕೆ ಭಾಗಶಃ ಬೇರೆಯಾಗಿದ್ದು, ಮತ್ತು ಎಡ ರೆಕ್ಕೆ ಹಿಂದಕ್ಕೆ ಬಗ್ಗಿ ಹೋಗಿತ್ತು. ಬುಲಕ್ ಳು ಅಮೇರಿಕನ್ ರೆಡ್ ಕ್ರಾಸ್ಗೆ ಬಹಿರಂಗವಾಗಿ ಸಹಕಾರ ನೀಡುತ್ತಾ ಬಂದಿದ್ದಾಳೆ. ಎರಡು ಭಾರಿ 1 ಮಿಲಿಯನ್ ಡಾಲರ್ ಗಳನ್ನು ದೇಣಿಗೆಯನ್ನು, ಮೊದಲನೆಯದಾಗಿ ಅಮೆರಿಕಾದ ಲಿಬೆರ್ಟಿ ಡಿಸಾಸ್ಟರ್ ರಿಲೀಫ್ ಫಂಡ್ ಮತ್ತು 4 ವರ್ಷಗಳ ನಂತರ 2004ರ ಇಂಡಿಯನ್ ಓಶನ್ ಭೂಕಂಪ ಮತ್ತು ಸುನಾಮಿಗಾಗಿ ನೀಡಿದ್ದಾಳೆ. 2010ರಲ್ಲಿ ಹೈಟಿಯ ಘೋರವಾದ ಭೂಕಂಪನಂತರ ಅವಳು ಅಲ್ಲಿನ ಪರಿಹಾರ ಕಾರ್ಯಗಳಿಗೆ 1 ಮಿಲಿಯನ್ ಡಾಲರ್ ಗಳನ್ನು ಕೊಟ್ಟಳು. ಅಕ್ಟೋಬರ್ 2004ರಂದು ಬುಲಕ್ ಳು ಬೆನ್ನಿ ದನೇಶ್ಜೂ ವಿರುದ್ಧ ಶತಕೋಟಿ ಡಾಲರ್ ತೀರ್ಪನ್ನು ಗೆದ್ದಳು, ಟೆಕ್ಸಾಸ್ನ ಲೇಕ್ ಆಸ್ಟಿನ್ನಲ್ಲಿನ ಅವಳ ಮನೆಯನ್ನು ಬೆನ್ನಿ ದನೇಶ್ಜೂ ಕತ್ತಿಸಿದ್ದನು; ಜೂರಿಯು ಆ ಮನೆಯು ವಾಸಕ್ಕೆ ಯೋಗ್ಯವಲ್ಲ ಎಂದು ತೀರ್ಪು ನೀಡಿತು. ಇದಾದ ನಂತರ ಆ ಮನೆಯನ್ನು ನೆಲಸಮ ಮಾಡಿ ಮರು ಕಟ್ಟಲಾಯಿತು. ಬುಲಕ್ ಳು ಟೈಬೀ ಐಲ್ಯಾಂಡ್ನಲ್ಲೂ ಸಹ ಮನೆಯೊಂದನ್ನು ಹೊಂದಿದ್ದಾಳೆ, ಇದು ಸವಣ್ಣಾ, ಜೋರ್ಜಿಯಾದಿಂದ ಕೆಲವೇ ಮೈಲಿಗಳು ದೂರವಿದೆ. ಏಪ್ರಿಲ್ 22, 2007ರಂದು ಜೇಮ್ಸ್ ಮತ್ತು ಬುಲಕ್ ಳ ದಕ್ಷಿಣ ಕಾಲಿಫಾರ್ನಿಯಾದ ಆರೆನ್ಜ್ ಕೌಂಟಿಯಲ್ಲಿನ ಮನೆಯ ಮುಂದೆ ಒಬ್ಬ ಮಹಿಳೆ ಮಲಗಿದ್ದಳು. ಯಾವಾಗ ಜೇಮ್ಸ್ ಆ ಮಹಿಳೆಯನ್ನು ಎದುರಿಸಿದನೋ, ಆಗ ಅವಳು ತನ್ನ 2004ರ ಬೆಳ್ಳಿ ಬಣ್ಣದ ಮೆರ್ಸಿಡೀಸ್ ಒಳ ಹೋಗಿ ನಂತರ ಅವನ ಮೇಲೆ ಗಾಡಿಯನ್ನು ಅವನ ಮೇಲೆ ಓಡಿಸುವ ಪ್ರಯತ್ನ ಮಾಡಿದಳು. ಆ ಮಹಿಳೆಯು ಸಾಂಡ್ರಾ ಬುಲಕ್ ನ ಕಾಡುವ ಅಭಿಮಾನಿಯಾಗಿದ್ದಳು ಎಂದು ಹೇಳಲಾಗಿದೆ. ಆ ಮಹಿಳೆ, ಮಾರ್ಸಿಯ ಡಯಾನ ವಾಲೆಂಟೈನ್ ನನ್ನು, ಮಾರ್ಕಾಸ್ತ್ರದಿಂದ ದಾಳಿ ಮಾಡಿದಳು ಎಂಬುದರ ಆರೋಪದ ಮೇಲೆ ತನಿಖೆ ಮಾಡಿ ಅವಳನ್ನು ಭಂಧಿಸಲಾಯಿತು. ಮೇ 2007ರಂದು, ಬುಲಕ್ ಳ ಬಳಿ ಮೂರು ವರ್ಷಗಳ ಕಾಲ ಸುಳಿಯದಂತೆ ಆ ಮಹಿಳೆಯ ವಿರುದ್ಧ ನಿರ್ಭಂಧ ಆಜ್ಞೆಯನ್ನು ಬುಲಕ್ ಳು ಗೆದ್ದಲು. ವಾಲೆಂಟೈನ್ ಬುಲಕ್ ಳು ತನ್ನ ಮೇಲೆ ಹೊರಿಸಿದ ಎಲ್ಲ ಆರೋಪಗಳು ತಾನು ಮಾಡಿದ್ದಲ್ಲ ಎಂದು ಪ್ರತಿಪಾದಿಸಿದಳು. ಏಪ್ರಿಲ್ 18, 2008ರಂದು ಬುಲಕ್ ಳು ಮಸ್ಸಚುಸೆಟ್ಸನಲ್ಲಿ ದಿ ಪ್ರೊಪೋಸಲ್ ಚಿತ್ರದ ಚಿತ್ರೀಕರಣದ ಸಮಯದಲ್ಲಿ, ಅವಳು ಮತ್ತು ಅವಳ ಪತಿಯು ಒಂದು ಎಸ್ ಯು ವಿಯಲ್ಲಿದ್ದು, ಒಬ್ಬ ಕುಡುಕ ಚಾಲಕನು ಮಧ್ಯಮ ವೇಗದಲ್ಲಿ ಬಂದು ಆ ಗಾಡಿಯನ್ನು ನೇರವಾಗಿ (ಡ್ರೈವರ್ಸ್ ಸೈಡ್ ಆಫ್ಸೆಟ್) ಗುದ್ದಿದನು. ವಾಹನಕ್ಕೆ ಹೆಚ್ಚು ಅನಾಹುತವಾಗಿರಲಿಲ್ಲ ಮತ್ತು ಅವರಿಗೂ ಯಾವುದೇ ರೀತಿಯ ಗಾಯಗಳಾಗಲಿಲ್ಲ. ನವೆಂಬರ್ 2009ರಂದು ಬುಲಕ್ ಮತ್ತು ಜೇಮ್ಸ್ ರು, ಜೇಮ್ಸ್ ನ ಮಾಜಿ ಪತ್ನಿಯಾದ ಮಾಜಿ ಅಶ್ಲೀಲ ಚಿತ್ರ ನಟಿ ಜನೀನ್ ಲಿಂಡೆಮುಲ್ಡರ್ನೊಂದಿಗೆ ಇದ್ದ ತನ್ನ ಮಗುವಿನ ಸ್ವಾಧೀನಕ್ಕೆ ದಾವೆ ಹಾಕಿದರು, ಮತ್ತು ಈ ದಾವೆಯಲ್ಲಿ ತನ್ನ ಐದು ವರ್ಷದ ಮಗಳನ್ನು ಕಾನೂನು ರೀತಿಯಲ್ಲಿ ಅಧಿಕೃತವಾಗಿ ತನ್ನ ಬಳಿಯೇ ಇಟ್ಟುಕೊಳ್ಳುವ ಹಕ್ಕನ್ನು, ಈ ದಾವೆಯಿಂದ ಪಡೆದರು. == ಚಲನಚಿತ್ರಗಳ ಪಟ್ಟಿ == 1990). (1994). ಸ್ಪೀಡ್ 67* == ಪ್ರಶಸ್ತಿಗಳು ಮತ್ತು ಇತರ ಅಂಗೀಕಾರಗಳು == ಬುಲಕ್ ಳ ಬಹುತೇಕ ಚಿತ್ರಗಳು ಹಣ ಪಡೆದು ಯಶಸ್ವೀಯಾಗಿದೆ. ಅಂಕಿ-ಅಂಶಗಳ ಪ್ರಕಾರ ಅವಳ ಸ್ಥಳೀಯ ಗಳಿಕೆಯ ಒಟ್ಟು ಮೊತ್ತ 1.7 ಬಿಲಿಯನ್ ಡಾಲರ್ ಗಳಷ್ಟು ಆಗಿದ್ದು, ಗಲ್ಲಾ ಪೆಟ್ಟಿಗೆಯಲ್ಲಿ ಉತ್ತಮ ಮೊದಲ 100 ತಾರೆಯರಲ್ಲಿ ಒಬ್ಬಳಾಗಿದ್ದಳು; ವಿಶ್ವದಾದ್ಯಂತ, 2009ರ ವರೆವಿಗೆ, ಅವಳ ಚಿತ್ರಗಳು 3.1 ಬಿಲಿಯನ್ ಡಾಲರ್ ಗೂ ಅಧಿಕ ಮೊತ್ತವನ್ನು ಗಳಿಸಿಕೊಟ್ಟಿದೆ. ವಿಮರ್ಶಕರು, ಅವಳ ತೆರೆಯ ಮೇಲಿನ ವ್ಯಕ್ತಿತ್ವವನ್ನು ಹೊಗಳುವಾಗ, ಅವಳ ಚಿತ್ರಗಳಿಗೆ ಹೆಚ್ಚಾಗಿ ಗಮನ ಕೊಟ್ಟಿಲ್ಲ. 2009ರಲ್ಲಿ ದಿ ಪ್ರೊಪೋಸಲ್ ಚಿತ್ರ ಬಿಡುಗಡೆಯಾಗುವವರೆವಿಗೂ, ಮಾರ್ಕ್ ಕಾರ್ಮೋಡ್ ಹೇಳಿಕೆಯಂತೆ, ಅವಳ ವೃತ್ತಿ ಜೀವನದಲ್ಲಿ ಅವಳು ಕೇವಲ ಮೂರು "ಒಳ್ಳೆಯ" ಚಿತ್ರಗಳನ್ನು ಮಾತ್ರ ಮಾಡಿದ್ದಾಳೆ-ಸ್ಪೀಡ್ , ವೈಲ್ ಯು ವರ್ ಸ್ಲೀಪಿಂಗ್ , ಮತ್ತು ಕ್ರಾಷ್ , ಮತ್ತೂ ಹೇಳುತ್ತಾ " ಅವಳು ತಮಾಷೆಯ ನಟಿ, ಮತ್ತು ಶೋಭೆಯುಳ್ಳವಳಾಗಿದ್ದು ಅವಳನ್ನು ಇಷ್ಟಪಡದೇ ಇರಲು ಸಾಧ್ಯವಿಲ್ಲ, ಆದರೂ ಅವಳು ಒಂದಾದ ಮೇಲೆ ಒಂದರಂತೆ ತೀರಾ ಕಳಪೆ ಹಾಗು ನಿಷ್ಪ್ರಯೋಜಕ ಚಿತ್ರಗಳನ್ನು ಮಾಡುತ್ತಿರುತ್ತಾಳೆ." . 18ನೇ ಡಿಸೆಂಬರ್ 2009ರ ವರೆವಿಗೆ, ಬುಲಕ್ ಳು ಮೂರು ಮನರಂಜನಾ ವಾರ ಪತ್ರಿಕೆಯ ಮುಖಪುಟಗಳಲ್ಲಿ ಕಾಣಿಸಿಕೊಂಡಿದ್ದಾಳೆ. ಗೋಲ್ಡನ್‌ ಗ್ಲೋಬೆ ಜನರ ಆಯ್ಕೆಯ ಪ್ರಶಸ್ತಿಗಳು ಎಂ ಟಿ ವಿ ಮೂವೀ ಪ್ರಶಸ್ತಿಗಳು ಜನರ ಆಯ್ಕೆಯ ಪ್ರಶಸ್ತಿಗಳು ಜನರ ಆಯ್ಕೆಯ ಪ್ರಶಸ್ತಿಗಳು ಟೀನ್‌ ಆಯ್ಕೆಯ ಪ್ರಶಸ್ತಿಗಳು ಗೋಲ್ಡನ್‌ ಗ್ಲೋಬೆ ಸ್ಯಾಟೆಲೈಟ್‌ ಪ್ರಶಸ್ತಿ‌ಗಳು ಟೀನ್‌ ಆಯ್ಕೆಯ ಪ್ರಶಸ್ತಿಗಳು (2005) ಟೀನ್‌ ಆಯ್ಕೆಯ ಪ್ರಶಸ್ತಿಗಳು ಸ್ಕ್ರೀನ್‌ ಆಕ್ಟರ್ಸ್‌ ಗಿಲ್ಡ್‌ ಪ್ರಶಸ್ತಿಗಳು ಸ್ಕ್ರೀನ್‌ ಆಕ್ಟರ್ಸ್‌ ಗಿಲ್ಡ್‌ ಪ್ರಶಸ್ತಿ‌ ಪೀಪಲ್ಸ್‌ ಚಾಯ್ಸ್ ಪ್ರಶಸ್ತಿಗಳು ಅಕಾಡೆಮಿ ಪ್ರಶಸ್ತಿ‌ == ಆಕರಗಳು == == ಹೊರಗಿನ ಕೊಂಡಿಗಳು == ಅಂತರಜಾಲ ಸಿನೆಮಾ ದತ್ತಸಂಚಯದಲ್ಲಿ ಬುಲಕ್ ಟೆಂಪ್ಲೇಟು: ಟೆಂಪ್ಲೇಟು: 2001-2020 ಟೆಂಪ್ಲೇಟು: 1994-